ಬನಶಂಕರಿ 6ನೇ ಹಂತದ ನಿವಾಸಿಗಳ ಸಂಘವು ಬೆಂಗಳೂರಿನ ಸೊಸೈಟಿಯ ರಿಜಿಸ್ಟ್ರಾರ್ನಿಂದ ಅಸೋಸಿಯೇಷನ್ ನೋಂದಾಯಿಸಲಾಗಿದೆ ಮತ್ತು ಇದರ ನೋಂದಣಿ ಸಂಖ್ಯೆ ಜಿ/ನೋ/ಬ/ಎನ್/ಒ/ಆರ್/18/2013-14. ‘ಬನಶಂಕರಿ 6ನೇ ಹಂತ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ ದ ವ್ಯಾಪ್ತಿ ಬನಶಂಕರಿ 6 ನೇ ಹಂತದ ಹೆಮ್ಮಿಗೆಪುರ ವಾರ್ಡ್ 198 ರಲ್ಲಿ 1 ರಿಂದ 11 ಬ್ಲಾಕ್, 4 ನೇ ಟಿ, ಬಿ & ಎಚ್ ಬ್ಲಾಕ್, ಮುಂದುವರಿದ ಬಡಾವಣೆ, ಬಿಬಿಎಂಪಿ ಯ ವಾರ್ಡ್ 198 ಮತ್ತು ಬಿಬಿಎಂಪಿ ಯ ಉತ್ತರಹಳ್ಳಿ ವಾರ್ಡ್ 184 ವರೆಗೆ ಇರುತ್ತದೆ.
ಬಿಡಿಎ ಅಧಿಕಾರಿಗಳೊಂದಿಗೆ ನಡೆದ ಸಭೆಗಳು ಅಭಿವೃದ್ಧಿ ಕಾರ್ಯಗಳು, ಅದರಲ್ಲಿ ತೆರದುಕೊಂಡಿರುವ ಮ್ಯಾನ್ ಹೊಲ್ ರಿಪೇರಿ ಮತ್ತು ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಯ, ಉದ್ಯಾನವನ ಅಭಿವೃದ್ಧಿ, ಬೀದಿ ದೀಪಗಳು, ಪ್ರಮುಖ ರಸ್ತೆಗಳ ನಿರ್ವಹಣೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗಿದೆ.
ಬನಶಂಕರಿ 6ನೇ ಹಂತಕ್ಕೆ ಒಳಚರಂಡಿ ಮತ್ತು ಕುಡಿಯುವ ನೀರು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ. 5 ಒದ್ದೆ ಬಾವಿಗಳು (Wet Wells), 3 ಒಳಚರಂಡಿ ಸಂಸ್ಕರಣ ಘಟಕಗಳು (STP), 160 ಕೋಟಿ ವೆಚ್ಚದ ಯೋಜನೆಗಳು ಕೈಗೊಳ್ಳಲಾಗಿವೆ. ಬಿ.ಡಬ್ಲ್ಯೂ.ಎಸ್.ಎಸ್.ಬಿ. ಯಲ್ಲಿ 5 ಕೋಟಿ ಠೇವಣಿ ಮಾಡಲಾಗಿದ್ದು, 16 ವರ್ಷಗಳ ನಂತರ ಜಿಎಲ್ಆರ್ ಕಾಮಗಾರಿಗಳು ನಡೆಯುತ್ತಿವೆ.